45 ದಿನಗಳಲ್ಲಿ Microsoft ಜೊತೆಗೆ ಡೀಲ್ ಮಾಡಿಕೊಳ್ಳದೆ ಹೋದಲ್ಲಿ TikTok US ನಿಂದ ಹೊರಗೆ: ಟ್ರಂಪ್

ÚLTIMAS NOTICIAS:

ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಆಗಸ್ಟ್ 3) ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಗೆ ಟಿಕ್ ಟಾಕ್ ಜೊತೆಗೆ ಡೀಲ್ ಮಾಡಿಕೊಳ್ಳಲು cuarenta y cinco ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯಲ್ಲಿ ಎರಡೂ ಕಂಪನಿಗಳೂ ಮಾತುಕತೆ ನಡೆಸದೆ ಹೋದಲ್ಲಿ ಚೀನಾ ಅಪ್ಲಿಕೇಶನ್ ಗೆ ಅಮೆರಿಕದಿಂದ ಹೊರಹೋಗುವ ಮಾರ್ಗ ತೋರಿಸಲಾಗುವದು ಎಂದಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎಫ್ ಪಿ ಈ ಮಾಹಿತಿಯನ್ನು ಪ್ರಕಟಿಸಿದೆ.

ಈ ಕುರಿತು ಮಾಹಿತಿ ಪ್ರಕಟಿಸಿರುವ ಸುದ್ದಿ ಸಂಸ್ಥೆ, «ಸೆಪ್ಟೆಂಬರ್ 15 ರೊಳಗೆ ಒಂದು ವೇಳೆ ಮೈಕ್ರೋಸಾಫ್ಟ್ ಜೊತೆಗೆ ಟಿಕ್ ಟಾಕ್ ಒಪ್ಪಂದ ಮಾಡಿಕೊಳ್ಳದೆ ಹೋದಲ್ಲಿ, ಶಾರ್ಟ್ ವಿಡಿಯೋ ಆಪ್ ಅಮೇರಿಕಾದಲ್ಲಿನ ತನ್ನ ವಹಿವಾಟನ್ನು ಬಂದ್ ಮಾಡಬೇಕಾಗಲಿದೆ» ಎಂದು ಹೇಳಿದ್ದಾರೆ.

– Agencia de Noticias AFP (@AFP) 3 de agosto de 2020

ಎರಡು ದಿನಗಳ ಹಿಂದೆಯಷ್ಟೇ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಟಿಕ್ ಟಾಕ್ ಅನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಶುಕ್ರವಾರ (ಜುಲೈ 31), ತಂತ್ರಜ್ಞಾನದ ದೈತ್ಯ ಮೈಕ್ರೋಸಾಫ್ಟ್ ಟಿಕ್ ಟಾಕ್ನ ಯುಎಸ್ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂಗಡ ಸುತ್ತಿನಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Deja un comentario

Tu dirección de correo electrónico no será publicada. Los campos obligatorios están marcados con *